-ಪ್ರೀತಿಯ ಮಳೆ- ಮನೆಯಾಚೆ ಮಳೆಯು ಮೆಲ್ಲಗೆ ಸದ್ದುಮಾಡಿದೆ ಮೈ ಮನಸು ನಡುಗುವಂತೆ ಅರಳಿ ಎದೆಯೋಳಗೆ ಶುರುವಾಗುತಿದೆ ನಿನ್ನ ನೆನಪುಗಳ ಹಾವಳಿ ಪ್ರೀತಿಗೂ ಮಳೆಗೂ ತಿಳಿದಿಲ್ಲ ವ್ಯತ್ಯಾಸಗಳು ಮಳೆ ಬಂದಾಗ ನೀನು ಮಾತ್ರ ನೆನಪಾಗುವೆ ಒದ್ದೆಯಾದ ನನ್ನ ತೋಳುಗಳು ನಿನ್ನ ಬಿಸಿ ಅಪ್ಪುಗೆಯನ್ನು ಬಯಸುತಿವೆ. ಮನದ ಕಿಟಕಿಯಿಂದ ಕದ್ದು ನೋಡಿದೆ ಮುದ್ದು ಮುದ್ದಾದ ನಿನ್ನ ಮೈಮಾಟ ಮನೆಯ ಕಿಟಕಿಯಿಂದ ಬಗ್ಗಿ ನೋಡಿದೆ ಆಚೆ ಮಳೆಯ ಸುತ್ತ ನಿನ್ನದೇ ಹುಡುಕಾಟ. ಬರಬಾರದೇ ಈ ಸುಂದರ ಸಮಯದಲ್ಲಿ ಮಳೆಯ ಜೊತೆ ತಂಗಾಳಿಯಾಗಿ ಕಾಣಿಸಬಾರದೆ ನಿನೋಮ್ಮೆ ಎದುರಲ್ಲಿ ತನು ಬಳಸುವ ಬೆಚ್ಚನೆಯ ಬಳ್ಳಿಯಾಗಿ -ಬಸವರಾಜ(ಹುಬ್ಳಿ)- ಪ್ರೀತಿಗಾಗಿ love for lovers ಕನ್ನಡ ಕವನಗಳು