ಮೂಕ ರಾಗ
------------------------
ಅಂದು ನೀ ಹಾಡಿದೆ
ನಾ ಬರೆದ ಕವಿತೆಯನ್ನು
ಕೇಳುವವರು ತೆಲೆದೂಗಿದರು
ನಿನ್ನನ್ನು ಹಾಡಿ ಹೋಗಳಿದರು................
ಇಂದು ನಾ ಹಾಡಿದೆ
ಮತ್ತೋಮ್ಮೆ ಅದೆ ಕವಿತೆಯನ್ನು
ಕುಳಿತವರು ಎದ್ದು ಹೋದರು
ಕೇಳುವವರೇ ಇಲ್ಲವಾದರು.................
ಅಂದು ನೀ ಹಾಡಿದೆ
ಅಲ್ಲಿ ತಾಳ ಮೇಳ ಚಪ್ಪಾಳೆಗಳಿತ್ತು
ಇಂದು ನಾ ಹಾಡಿದೆ
ಇಲ್ಲಿ ನೋವು ಕಣ್ಣಿರಿಗು ಪಾಲಿತ್ತು...........
ಬಂದ ವಿಕ್ಷಕರು ಕೇಳಿದರು
ಇದು ಹಂಸರಾಗ ಇರಬಹುದೇ ಎಂದು
ಹೇಗೆ ಹೇಳಲಿ ಗೇಳತಿ
ಇದು ಒಂಟಿತನದ ಮೂಕ ರಾಗವೆಂದು.......
----ಬಸವರಾಜ(ಹುಬ್ಳಿ)---
By
love for lovers
Basavaraja (Hubli)
9066664591
Comments