-ಕತ್ತಲಾಗಿದೆ ಬದುಕು- ಚಂದ್ರನಂತೆ ಈ ಬಾಳು, ಒಮ್ಮೋಮ್ಮೆ ಮುಸುಕು, ಮತ್ತೋಮ್ಮೆ ಬೆಳಕು, ಮುಸುಕು ಆವರಿಸಿದೆ ಈ ಮನದೊಳಗೆ, ಕಾಯಬೇಕು ನಾನು ಬೆಳಕು ಬರುವವರೆಗೆ...! ಕಾಲ ಚಕ್ರದಂತೆ ಈ ಬಾಳು, ಒಮ್ಮೆಮ್ಮೆ ಬಡತನ, ಮತ್ತೋಮ್ಮೆ ಸಿರಿತನ, ಬಡತನ ಎದುರಾಗಿದೆ ಈ ಗಳಿಗೆ, ಕಾಯಬೇಕು ನಾನು ಒಳ್ಳೆ ಕಾಲ ಬರುವವರೆಗೆ...! ಸಾಗರದ ಅಲೆಯಂತೆ ಈ ಬಾಳು, ಹಿಂದಕ್ಕೆ ಜಾರಿದ ಮರುಕ, ಮುಂದೆ ದಡ ಸೇರುವ ತವಕ, ಜಾರಿದೆ ಈ ಮನವು ಸಾಗರದೆಡೆಗೆ, ಕಾಯಬೇಕು ನಾನು ದಡ ಸೇರುವವರೆಗೆ...! ನೋವು ನಲಿವಿನಿಂದ ಕೂಡಿದೆ ಈ ಬಾಳು, ಒಮ್ಮೋಮ್ಮೆ ಅಳುವು, ಮತ್ತೋಮ್ಮೆ ನಗುವು, ಒದ್ದಾಡಿದೆ ಮನಸು ನೋವಿನ ಕಣ್ಣಿರೊಳಗೆ, ಕಾಯಬೇಕು ನಾನು ಆನಂದ ಭಾಷ್ಪ ಬರುವವರೆಗೆ...! ---ಬಸವರಾಜ(ಹುಬ್ಳಿ)----- By Kannada Kavithe love for lovers Basavaraja(Hubli) 9066664591